ಹಾವೇರಿ: ಹಾವೇರಿ ಜಿಲ್ಲೆ ಸವಣೂರು ಪಟ್ಟಣದಲ್ಲಿ ಎರಡು ಕೊರೋನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆ ಸವಣೂರು ಪಟ್ಟಣವನ್ನಿಂದು ಸಂಪೂರ್ಣ ಸೀಲ್ ಡೌನ್ ಮಾಡಲಾಯಿತು. ಪಟ್ಟಣದ ಎಲ್ಲ ಗಡಿಗಳನ್ನ ಬಂದ್ ಮಾಡಿ ಯಾರೂ ಹೊರ ಹೊಗದಂತೆ ಮತ್ತು ಒಳ ಬರದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸೀಲ್ ಡೌನ್ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಸೋಂಕಿತನ ಸಂಪರ್ಕದಲ್ಲಿದ್ದ ಇತರರ ವರದಿಗಾಗಿ  ಜಿಲ್ಲಾಡಳಿತ ಕಾಯುತ್ತಿದೆ. ಇನ್ನು ಸೀಲ್ ಡೌನ್ ವಿರೋಧಿಸಿ ಎಸ್.ಎಂ ಕೃಷ್ಣ ಬಡಾವಣೆಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ಇಲ್ಲಿನ ಎಸ್.ಎಂ ಕೃಷ್ಣ ಬಡಾವಣೆಯಲ್ಲಿ ಸೋಂಕು‌ ಹರಡದಿರಲು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ತರಕಾರಿ ಹಾಗೂ ದಿನಸಿ ವಸ್ತುಗಳ ಖರೀದಿಗಾಗಿ ಸಾಲ ಮಾಡಿಕೊಂಡಿದ್ದೇವೆ. ಕಳೆದ 40 ದಿನಗಳಿಂದ ಕೂಲಿ ಕೆಲಸವಿಲ್ಲ ವಿಷ ಸೇವಿಸಲು ದುಡ್ಡಿಲ್ಲ. ಜಿಲ್ಲಾಡಳಿತ ದಿನನಿತ್ಯ ದಿನಸಿ ವಸ್ತುಗಳನ್ನು ಪುಕ್ಕಟೆಯಾಗಿ ನೀಡಬೇಕು, ಇಲ್ಲವಾದಲ್ಲಿ ನಮ್ಮನ್ನು ಸೀಲ್ ಡೌನ್ ಪ್ರದೇಶದಿಂದ ಮುಕ್ತಗೊಳಿಸಿ ಎಂದು ಒತ್ತಾಯಿಸಿದರು. ಈ ವೇಳೆ ಮದ್ಯ ಪ್ರವೇಶಿಸಿದ ಜಿಲ್ಲಾಧಿಕಾರಿಗಳು ಉಚಿತವಾಗಿ ದಿನನಿತ್ಯ ವಸ್ತುಗಳನ್ನು ನೀಡುವುದಾಗಿ ಭರವಸೆ ನೀಡಿದರು. ಡಿಸಿ ಭರವಸೆ ಹಿನ್ನೆಲೆ ಪ್ರತಿಭಟನೆ ಕೈಬಿಡಲಾಯಿತು.

Leave a Reply

Your email address will not be published. Required fields are marked *

You May Also Like

ಬೆಳಗಾವಿಯಲ್ಲಿ ಮರಾಠಿ ಭಾಷಾ ನಾಮಫಲಕಕ್ಕೆ ಕಪ್ಪು ಮಸಿ

: ಮಹರಾಷ್ಟ್ರದಲ್ಲಿ ಕನ್ನಡ ಭಾಷೆ ನಾಮಫಲಕಕ್ಕೆ ಮಸಿ ಬಳೆದು ಅವಮಾನ ಮಾಡಿದ್ದು ವಿರೋಧಿಸಿ ಕರವೇ (ಶಿವರೇಗೌಡ ಬಣ) ಜಿಲ್ಲಾಧ್ಯಕ್ಷ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಮರಾಠಿ ಭಾಷಾ ನಾಮ ಫಲಕಕ್ಕೆ ಮಸಿ ಬಳೆದು ವಿರೋಧ ವ್ಯಕ್ತಪಡಿಸಿದರು.

ಕೆ.ಎಸ್.ಆರ್.ಟಿ.ಸಿ ನೌಕರರ ವಿರುದ್ಧ ಹುನ್ನಾರ!: ಸಂಬಳವಿಲ್ಲದೇ ಒಂದ್ ವರ್ಷ ರಜೆಗೆ ನಿರ್ಧಾರ!

ಕರ್ನಾಟಕ ರಾಜ್ಯ ಸಾರಿಗೆ ನಿಗಮದಲ್ಲಿ ನೌಕರರ ಹಕ್ಕುಗಳನ್ನು ದಮನ ಮಾಡಲು ವ್ಯವಸ್ಥಿತ ಹುನ್ನಾರ ನಡೆದಿದೆ ಎಂದು ಚಾಲಕರು ಮತ್ತು ನಿರ್ವಾಹಕರು ಆತಂಕಗೊಂಡಿದ್ದಾರೆ.