ಗದಗ: ಕರ್ನಾಟಕ ಬಂದ್ ಹಿನ್ನಲೆ, ಮುಳಗುಂದ ನಾಕಾ ಬಳಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಟೈರ್ ಗೆ ಬೆಂಕಿ ಹಚ್ಚಲು ಪ್ರತಿಭಟನಾಕಾರರು ಮುಂದಾದರು.

ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪ್ರತಿಭಟನಾಕಾರರು ಹಾಗೂ ಪೊಲೀಸರ ಮದ್ಯೆ ಮಾತಿನ ಚಕಮಕಿ ನಡೆಯಿತು. ಇದರಿಂದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಟೈರ್ ಗೆ ಬೆಂಕಿ ಹಚ್ಚುವುದಾಗಿ ಟೈರ್ ಗೆ ಕರವೇ ಕಾರ್ಯಕರ್ತರು ಜೋತು ಬಿದ್ದರು.  ಈ ವೇಳೆ ಪ್ರತಿಭಟನಾಕಾರರಿಂದ ಪೊಲೀಸರು ಟೈರ್ ‌ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಬೂಟ್, ಚೆಪ್ಪಲಿ, ಕಟ್ಟಿಗೆಗೆ ಬೆಂಕಿ ಹಚ್ಚಿ ಕರವೇ ಕಾರ್ಯಕರ್ತರ ಆಕ್ರೋಶ ಹೊರಹಾಕುವ ಮೂಲಕ ಮುಳಗುಂದ ನಾಕಾದಲ್ಲಿ ಕರವೇ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.

ಸರ್ಕಾರದ ಕೈಗೊಂಬೆ ಆಗಿ ಕೆಲಸ ಮಾಡಬೇಡಿ, ನಿಮ್ಮ ಕೆಲಸ ನೀವು ಮಾಡಿ ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಕರವೇ ಕಾರ್ಯಕರ್ತರು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು.

ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಕರವೇ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆಯಿತು.  ಬಸ್ ತಡೆದು ರಸ್ತೆ ತಡೆ ನಡೆಸಲು ಪ್ರತಿಭಟನಾಕಾರರು ಮುಂದಾದರು.

ಈ ವೇಳೆ ಹುಬ್ಬಳ್ಳಿ-ಗದಗ ಬಸ್ ತಡೆಯಲು ಕರವೇ ಕಾರ್ಯಕರ್ತನೋರ್ವ ಮುಂದಾದಾಗ ಸ್ವಲ್ಪದರಲ್ಲಿಯೇ ಬಚಾವ್ ಆದ ಘಟನೆ ನಡೆಯಿತು. ಬಸ್ ಡ್ರೈವರ್ ಜಾಗರೂಕತೆಯಿಂದ ಬಚಾವ್ ಆದ ಯುವಕನನ್ನು ಪೊಲೀಸರು ಬಸ್ ಅಡಿಯಿಂದ ಎಳೆದು ಹೊರ ಹಾಕಿದರು.

ಕರವೇ ರಾಜ್ಯ ಮುಖಂಡ ಎಚ್.ಎಸ್.ಸೋಂಪೂರ, ಜಿಲ್ಲಾಧ್ಯಕ್ಷ ಹನಮಂತಪ್ಪ ಅಬ್ಬಿಗೇರಿ ನೇತೃತ್ವದಲ್ಲಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಈದ್ ಮೀಲಾದ್ ಆಚರಣೆಗೆ ಸರ್ಕಾರದ ಮಾರ್ಗಸೂಚಿಗಳು

ಬೆಂಗಳೂರು: ಮುಸ್ಲೀಂ ಬಾಂಧವರು ದಿನಾಂಕ 30-10-2020 ರಂದು ರಾಜ್ಯಾದ್ಯಂತ ಈದ್ ಮೀಲಾದ್ ಹಬ್ಬವನ್ನು ಆಚರಿಸಲಿದ್ದು, ಹಬ್ಬ ಆಚರಣೆಯ ಬಗ್ಗೆ ಸರ್ಕಾರದ ಮಾರ್ಗಸೂಚಿ ಈ ಕೆಳಗಿನಂತಿದೆ.

ನಾಡಬಾಂಬ್‌ ; ಹಸುವಿನ ಬಾಯಿ ಛಿದ್ರ

ಜಮೀನಿನಲ್ಲಿ ಮೇಯುತ್ತಿದ್ದ ಸೀಮೆ ಹಸುವೊಂದು ನಾಡಬಾಂಬ್‌ ಜಿಗಿದ ಪರಿಣಾಮ ಅದರ ಬಾಯಿ ಛಿದ್ರಗೊಂಡಿರುವ ಘಟನೆ ತಾಲ್ಲೂಕಿನ ಕೆಬ್ಬಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಗದಗ ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್!

ಜಿಲ್ಲೆಯಲ್ಲಿಂದು 18 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 228 ಕ್ಕೆ ಏರಿಕೆಯಾಗಿದೆ. ಒಟ್ಟು ಗುಣಮುಖ ಹೊಂದಿ ಬಿಡುಗಡೆಯಾಗಿದ್ದು ಈವರೆಗೆ 128 ಕೇಸ್ ಗಳು. 96 ಸಕ್ರೀಯ ಪ್ರಕರಣಗಳಿವೆ. ಇದರಲ್ಲಿ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೆಲ್ಥ್ ಬುಲೆಟಿನ್ ತಿಳಿಸಿದೆ