ಗದಗ:  ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಜಾರಿಗೆ ತಂದಿದೆ.
     ಒಂದು ಜಿಲ್ಲೆಗೆ ಒಂದು ಉತ್ಪನ್ನ ಆಧಾರದ ಮೇಲೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 80 ಘಟಕಗಳಿಗೆ ಗುರಿಯನ್ನು ನಿಗದಿಪಡಿಸಲಾಗಿದ್ದು, ಪ್ರತಿ ಘಟಕಕ್ಕೆ ಶೇ. 50 ರಷ್ಟು ಕ್ರೆಡಿಟ್ ಲಿಂಕ್ ಆಧಾರದ ಮೇಲೆ ಧನಸಹಾಯ ಒದಗಿಸಲಾಗುವುದು. ಬ್ಯಾಡಗಿ ಮೆಣಸಿನಕಾಯಿ ಸಂಸ್ಕರಣಾ ಘಟಕಗಳಿಗೆ ಬೆಳೆಯ ವರ್ಗಿಕರಣ, ಶ್ರೇಣಿಕರಣ, ಬ್ರ್ಯಾಂಡಿಂಗ್, ಲೆಬಲಿಂಗ್ ಮಾರುಕಟ್ಟೆಯ ಬೆಂಬಲ ಮತ್ತು ರಪ್ತಿಗೆ ಪ್ರೋತ್ಸಾಹ ನೀಡುವ ಮೂಲಕ ಅಂತಹ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಉದ್ಯಮೆದಾರರಾಗಿ ರೂಪಿಸಲು ಯೋಜಿಸಲಾಗಿದೆ.


            ಜಿಲ್ಲೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಸಂಸ್ಕರಣ ಕಾರ್ಯದಲ್ಲಿ ನಿರತವಾಗಿರುವ ಸಹಕಾರ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು ಮತ್ತು ಸಾಮಾನ್ಯ ಸೌಕರ್ಯ ಒದಗಿಸುವ ಸಂಸ್ಥೆಗಳು ಇದರ ಪ್ರಯೋಜನವನ್ನು ಪಡೆಯಲು   http://pmfme.mofpi.gov.in   ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಸಮೀಪದ ಜಂಟಿ ಕೃಷಿ ನಿರ್ದೇಶಕರು, ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಉಪ ಕೃಷಿ ನಿರ್ದೇಶಕರ ಕಚೇರಿ ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸಂಪನ್ಮೂಲ ವ್ಯಕ್ತಿಗಳಾದ ಎಸ್.ವ್ಹಿ. ಘಳಗಿ (9663579897), ಮತ್ತು ಶ್ರೀನಿವಾಸ ರಾಠೋಡ (9686641134) ಇವರನ್ನು ಸಂಪರ್ಕಿಸಲು ಕೋರಿದೆ.

Leave a Reply

Your email address will not be published. Required fields are marked *

You May Also Like

ಲಕ್ಷ್ಮೇಶ್ವರ ನಗರಸಭೆಯಿಂದ ಮರೆಯಾಗಿ ಹೋದ ಅಭಿವೃದ್ಧಿ ಕಾಮಗಾರಿಗಳು

ಉತ್ತರಪ್ರಭ ಸುದ್ದಿ ಲಕ್ಷ್ಮೇಶ್ವರ: ಪಟ್ಟಣದ ನಾಲ್ಕನೇ ವಾರ್ಡನಲ್ಲಿ ರಸ್ತೆ ದುರಸ್ಥಿ ಮತ್ತು ನೀರಿನ ಹಾಹಾಕಾರ ಎದ್ದು…

ಪ್ರಬುದ್ಧ ಜಾಣತನದ ನಿಲುವು ಪ್ರಕಟಿಸಲು ಪ್ರಧಾನಿಗೆ ಪತ್ರ

ಲಾಕ್ ಡೌನ್ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಮುಖಂಡ ಟಿ.ಈಶ್ವರ ಬಹಿರಂಗ ಪತ್ರ ಬರೆದಿದ್ದಾರೆ.

ಪ್ಯಾಕೇಜ್ ಟೆಂಡರ್ ರದ್ದುಗೊಳಿಸುವಂತೆ ಒತ್ತಾಯ

ವರದಿ: ವಿಠಲ ಕೆಳೂತ್ಮಸ್ಕಿ: ಪ್ಯಾಕೇಜ್ ಟೆಂಂಡರ್ ರದ್ದುಗೊಳಿಸಿ ಭ್ರಷ್ಟವಾರ ತಡೆಯುವಂತೆ ಒತ್ತಾಯಿಸಿ ಇಲ್ಲಿನ ಗುತ್ತಿಗೆದಾರ ಸಂಘದ…

ಬೈಕ ಕಳ್ಳನನ್ನು ಬಂದನ ಮಾಡಿದ ಪೊಲೀಸರು

ಲಕ್ಷ್ಮೇಶ್ವರ.ಬೈಕ್ ಕಳ್ಳನನ್ನು ಪತ್ತೆ ಹಚ್ಚುವಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ಠಾಣೆ ಪೊಲೀಸರು ಯಶಸ್ಸಿಯಾಗಿದ್ದಾರೆ.ನಾಲ್ಕು ಬೈಕಗಳನ್ನು ಕಳ್ಳತನ…