ಆಲಮಟ್ಟಿ : ಆಲಮಟ್ಟಿಯ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ನಿದೇ೯ಶಕರಾಗಿ ಈ ಹಿಂದೆ ಧೀಘಾ೯ವಧಿ ಸೇವೆ ಸಲ್ಲಿಸಿದ್ದ ಮುದ್ದೇಬಿಹಾಳ ಕ್ಷೇತ್ರದ ಮಾಜಿ ಶಾಸಕ ಎಂ.ಎಂ.ಸಜ್ಜನ(95) ಮುಸ್ಸಂಜೆ ಇಳಿವಯೋಮಾನದಲ್ಲಿ ಸೋಮವಾರ ಮಧ್ಯರಾತ್ರಿ ವಯೋಸಹಜ ಸಾವನ್ನಪ್ಪಿದ್ದಾರೆ.ಅವರ ವಿಧಿವಶಕ್ಕೆ ಇಲ್ಲಿನ ಗಣ್ಯರನೇಕರು ತೀವ್ರ ಸಂತಾಪ ಸೂಚಿಸಿದ್ದಾರೆ.


ಎಸ್.ವಿ.ವಿ.ಸಂಸ್ಥೆಯ ನಿದೇ೯ಶಕರಾಗಿ ಸೇವೆ ಸಲ್ಲಿಸಿದ್ದ ಈ ಹಿರಿಯ ಚೇತನರ ಸಾಮಾಜಿಕ ಸೇವಾ ಕಾಯಕಗಳು ನಿಷ್ಠೆ, ಬದ್ದತೆಯಿಂದ ಸಾಗಿದ್ದನ್ನು ಮರೆಯಲಾಗದು. ಅತ್ಯಂತ ಸರಳ ನಡೆ ನುಡಿಗೆ ಹೆಸರಾಗಿದ್ದ ಎಂ.ಎಂ. ಸಜ್ಜನರು ಸಜ್ಜನರ ಸಂಗದಲ್ಲೇ ಸಜ್ಜನರಾಗಿಯೇ ಮರೆಯಾಗಿದ್ದಾರೆ. ಜನಮಾನಸದಲ್ಲಿ ಅಚ್ಚುಮೆಚ್ಚಿನ ನಾಯಕರಾಗಿ ಅಚ್ಚಳಿಯಾಗಿ ಉಳಿದಿದ್ದಾರೆ. ಗದುಗಿನ ತೋಂಟದ ಲಿಂ,ಡಾ.ಸಿದ್ದಲಿಂಗ ಶ್ರೀಗಳವರ ಆಪ್ತರಾಗಿ ಅನುಯಾಯಿಗಳಾಗಿ ಜನಸೇವಾ ಕೈಂಕರ್ಯಕ್ಕೆ ಅಪಿ೯ತರಾಗಿದ್ದರು. ಅವರು ಶಾಸಕರಾಗಿ ಗೈದಂಥ ಸೇವೆಯೂ ಅನನ್ಯ. ಬಸವೈಕ್ಯರಾದ ಶರಣ ಎಂ.ಎಂ.ಸಜ್ಜನ ಅವರ ಆತ್ಮಕ್ಕೆ ಬಸವಾದಿ ಪ್ರಮಥರು ಚಿರಶಾಂತಿ ಕರುಣಿಸಲಿ. ದುಃಖ ತಪ್ತ ಕುಟುಂಬಕ್ಕೆ,ಅಭಿಮಾನ ಬಳಗಕ್ಕೆ ನೋವು ಸಹಿಸಿಕೊಳ್ಳುವ ಶಕ್ತಿ ಭಗವಂತ ದಯಪಾಲಿಸಲಿ ಎಂದು ಎಡೆಯೂರ ಸಿದ್ದಲಿಂಗ ಸಂಸ್ಥಾನಮಠ ಗದಗ ಡಂಬಳದ ಪೀಠಾಧಿಪತಿ ಜಗದ್ಗುರು ತೋಂಟದ ಡಾ.ಸಿದ್ದರಾಮ ಮಹಾಸ್ವಾಮಿಗಳು, ಸಂಸ್ಥೆಯ ಆಡಳಿತಾಧಿಕಾರಿ ವಿಶ್ರಾಂತ ಪ್ರಾಂಶುಪಾಲ ಶಿವಾನಂದ ಪಟ್ಟಣಶೆಟ್ಚರ ಕಂಬನಿ ಮಿಡಿದು ಭಾವಪೂರ್ಣ ಶೋಕ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


ಶಾಲಾ,ಕಾಲೇಜುಗಳಲ್ಲಿ ಮೌನಾಚರಣೆ ಹಿರಿಯ ಜೀವ ಎಂ.ಎಂ.ಸಜ್ಜನ ಅವರ ಆಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಎಸ್.ವಿ.ವಿ.ಶಿಕ್ಷಣ ಸಂಸ್ಥೆಯ ವಿವಿಧ ಶಾಲಾ,ಕಾಲೇಜುಗಳಲ್ಲಿ ಗುರು ಬಳಗದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳ ಸಮೂಹ ಮೃತರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಿ ಶ್ರದ್ಧಾಂಜಲಿ ಅಪಿ೯ಸಿದರು.


ರಾವಬಹದ್ದೂರ ಡಾ.ಫ.ಗು.ಹಳಕಟ್ಟಿ (ಆರ್.ಬಿ.ಪಿ.ಜಿ) ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ, ಎಂ.ಎಚ್.ಎಂ.ಪ.ಪೂ.ಕಾಲೇಜಿನಲ್ಲಿ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲ ಎಸ್.ಎಚ್.ಕೆಲೂರ, ಎಂ.ಎಚ್.ಎಂ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ, ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಕಮಲಾಕ್ಷಿ ಹಿರೇಮಠ , ಮಂಜಪ್ಪ ಹಡೇ೯ಕರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಗುರುಮಾತೆ ತನುಜಾ ಪೂಜಾರಿ ಅವರುಗಳು ತಮ್ಮ ಸಿಬ್ಬಂದಿ ಹಾಗು ಮಕ್ಕಳ ಬಳಗದೊಂದಿಗೆ


ಬೆಳಿಗ್ಗೆ ಶಾಲಾ,ಕಾಲೇಜು ಪ್ರಾರ್ಥನೆ ವೇಳೆಯಲ್ಲಿ ಮೃತರ ಗೌರವಾರ್ಥ ಎರಡು ನಿಮಿಷ ಮೌನ ಆಚರಿಸಿ ಸಾಮೂಹಿಕ ಶ್ರದ್ಧಾಂಜಲಿ ಸಲ್ಲಿಸಿದರು . ಶಿಕ್ಷಣ ಪ್ರೇಮಿ ಬಸಯ್ಯ ಶಿವಯೋಗಿಮಠ ಶೋಕ ಕಂಬನಿ ಮಿಡಿದಿದ್ದಾರೆ.
ಸಜ್ಜನರ ಹೆಜ್ಜೆ ಗುರುತು… ಶತಕದಂಚಿನಲ್ಲಿ ಜೀವಿಸುತ್ತಿದ್ದ ಈ ಹಿರಿಯ ಜೀವಕ್ಕೆ ಬರೋಬ್ಬರಿ 95 ವಯಸ್ಸು. ಪೂರ್ಣ ಹೆಸರು ಮುರಗೆಪ್ಪ ಮಲ್ಲಪ್ಪ ಸಜ್ಜನ. ಅವರೇ ಈ ಮುಸ್ಸಂಜೆ ಇಳಿವಯೋಮಾನದ ಎಂ.ಎಂ.ಸಜ್ಜನ ! ಅವರ ಹೆಜ್ಜೆ ಗುರುತು ಅಪರೂಪಮಯ !
1960 ರಿಂದ 1972 ರವರೆಗೆ ಸರಕಾರಿ ವಕೀಲರಾಗಿ ಬಸವನ ಬಾಗೇವಾಡಿ ಹಾಗು ಮುದ್ದೇಬಿಹಾಳ ನ್ಯಾಯಾಲಯದಲ್ಲಿ ಅನುಪಮ ಸೇವೆ ಸಲ್ಲಿಸಿಕೆ. ಬಳಿಕ 1972 ರಿಂದ 1978 ರ ವರೆಗೆ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಜನ ಸೇವೆಗೆ ಇಳಿದ ಎಂ.ಎಂ. ಸಜ್ಜನ ದೇವರಾಜ ಅರಸರ ಒಡನಾಡಿಗಳಾಗಿ ಜನಪರ ಕೆಲಸ ಕಾರ್ಯಗಳೊಂದಿಗೆ ಮಿನುಗಿದ್ದರು ಅಂದು ! ಸಿಎಂ ಅಗುವ ಕನಸು ಕೂಡಾ ಅವರಲ್ಲಿ ಮೊಳಕೆಯೊಡೆದಿತ್ತು ಎಂಬುದಕ್ಕೆ ಅಗಾಗ ಆಲಮಟ್ಟಿ ಎಸ್.ವಿ.ವಿ ಸಂಸ್ಥೆ ಹಲ ಕಾರ್ಯಕ್ರಮದಲ್ಲಿ ಭಾಗ ವಹಿಸಿದಂಥ ಸಂದರ್ಭದಲ್ಲಿ ಸ್ವತಃ ಆತ್ಮವಿಶ್ವಾಸದಿಂದ ಅವರು ಹೀಗೆ ನುಡಿಯುತ್ತಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ ಇಲ್ಲಿನ ಅವರ ಒಡನಾಡಿಗಳು. ಮುಖ್ಯ ಮಂತ್ರಿಯಾಗುವ ಆರ್ಹತೆ ನನ್ನಲ್ಲಿದೆ. ಒಂದಿಲ್ಲೊಂದು ದಿನ ಅಗೇ ಅಗುತ್ತೆನೆ ಎಂದು ಬಹಿರಂಗವಾಗಿ ಮನದಲ್ಲಿ ಹುದುಗಿ ಕುಳಿತ್ತಿದ್ದ ಇಂಗಿತವನ್ನು ನಿರ್ಭಡೆಯಿಂದ ಹೊರ ಹಾಕುತ್ತಿದ್ದ ದಿಟ್ಟ ಛಾತಿವಂತ ಶಾಸಕರಾಗಿದ್ದರು ಸಜ್ಜನರು ಎಂದು ಅಂದಿನ ಅವರಾಡುತ್ತಿದ್ದ ಮಾತುಗಳನ್ನು ಮೆಲುಕು ಹಾಕುತ್ತಾರೆ ಈ ಭಾಗದ ಜನ !
ಧಾರವಾಡ ಉಚ್ಚ್ ನ್ಯಾಯಾಲಯದ ಬೇಂಚ್ ಸ್ಥಾಪನೆಯಲ್ಲಿ ಆಸಕ್ತಿದಾಯಕ ಪಾತ್ರ ವಹಿಸಿದ್ದ ಮಾಜಿ ಶಾಸಕ ಸಜ್ಜನ, ತಂಗಡಗಿ ಧನ್ನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ಸೇತುವೆ ನಿಮಾ೯ಣದ ಕಾರ್ಯದಲ್ಲಿ ಮಹತ್ತರ ಪಾತ್ರ ನಿಭಾಯಿಸಿದ್ದಾರೆ. ಜೊತೆಗೆ ಅಂದು ತಾಳಿಕೋಟಿ ಡೋಣಿ ಸೇತುವೆ ,ಮುದ್ದೇಬಿಹಾಳ ಹಳೆ ಬಸ್ ನಿಲ್ದಾಣ ನಿಮಾ೯ಣ ಸೇರಿದಂತೆ ನಾನಾ ಸರಕಾರಿ ಕಚೇರಿ ತರುವಲ್ಲಿ ಹಾಗು ಕಟ್ಟಡ ನಿಮಾ೯ಣ ಮಾಡುವಲ್ಲಿ,ಮೂಲಭೂತ ಸೌಲಭ್ಯ ಒದಗಿಸುವಂಥ ಮಹೋನ್ನತ ಕೆಲಸಗಳಲ್ಲಿ ಹೀಗೆ ಅಪಾರ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ಬೆಳದಂಥ ಸರಳತೆಗೆ ಹೆಸರಾದ ಮಾಜಿ ಶಾಸಕ ಎಂ.ಎಂ.ಸಜ್ಜನ ವಯೋಸಹಜ ದಿಂದ ಇಹಲೋಕ ತ್ಯೆಜಿಸಿರುವುದು ಅಭಿಮಾನಿಗಳಲ್ಲಿ ನೋವುಂಟು ಮಾಡಿದೆ.

Leave a Reply

Your email address will not be published. Required fields are marked *

You May Also Like

ನಾಳೆಯಿಂದ ರಾಜ್ಯದಲ್ಲಿ ಬಸ್ ಸಂಚಾರ?: ನಿಯಮಗಳೇನು ಗೊತ್ತಾ?

ಬೆಂಗಳೂರು: ಲಾಕ್ ಡೌನ್ ನಿಂದ ಬಸ್ ಸಂಚಾರ ಬಂದ್ ಮಾಡಲಾಗಿತ್ತು. ಇದೀಗ ನಾಳೆಯಿಂದ ಮತ್ತೆ ಬಸ್…

ತೋಂಟದ ಶ್ರೀ ಕಣ್ಣಂಚಿನಲ್ಲಿ ಹಸಿರು ಸೊಗಸು…

ಮುಂಗಾರು ಋತುವಿನಲ್ಲಿ ಹಚ್ಚು ಹಸಿರಾಗಿ ಕಂಗೊಳಿಸುವ ಆಲಮಟ್ಟಿ ಧರೆಯ ಮೇಲಿನ ನೈಸರ್ಗಿಕ ಹಸಿರಿನ ಕಾವ್ಯ ವೈಭವವನ್ನು ಗದುಗಿನ ತೋಂಟದಾರ್ಯ ಸಂಸ್ಥಾನಮಠದ ಪೀಠಾಧಿಪತಿ ತೋಂಟದ ಡಾ. ಸಿದ್ದರಾಮ ಮಹಾಸ್ವಾಮೀಜಿಯವರು ಕಣ್ತುಂಬಿಸಿಕೊಂಡು ಖುಷಿ ಪಟ್ಟರು.

ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾ ಬಗರಹುಕುಮ್ ಸಾಗುವಳಿ; ಸದನದಲ್ಲಿ ಚರ್ಚಿಸಲು ವಿರೋಧ ಪಕ್ಷದ ನಾಯಕರಿಗೆ – ರವಿಕಾಂತ ಅಂಗಡಿ ಒತ್ತಾಯ

ಉತ್ತರಪ್ರಭ ಸುದ್ದಿಗದಗ: ಶಿರಹಟ್ಟಿ ತಾಲೂಕ ದೇವಿಹಾಳ ತಾಂಡಾದ ಬಗರ ಹುಕುಮ್ ಸಾಗುವಳಿದಾರರಿಗೆ ಅರಣ್ಯ ಇಲಾಖೆಯಿಂದ ಸಾಗುವಳಿ…

ಗ್ರಾಮೀಣ ಭಾಗಕ್ಕೂ ಬಂದೇ ಬಿಟ್ಟಿತು ಕೊರೊನಾ!

ಬೆಳಗಾವಿ: ಇಲ್ಲಿಯವರೆಗೂ ನಗರ ಪ್ರದೇಶದ ಜನರ ಆತಂಕಕ್ಕೆ ಕಾರಣವಾಗಿದ್ದ ಕೊರೊನಾ ಮಹಾಮಾರಿ ಸದ್ಯ ಹಳ್ಳಿಗರ ನಿದ್ದೆಗೆಡಿಸಿದೆ.…