ಉತ್ತರಪ್ರಭ

ನೆಲೋಗಿ: ರಾಷ್ಟೀಯ ಹೆದ್ದಾರಿ 50ರ ಕಲಬುರ್ಗಿಯಿಂದ ವಿಜಯಪುರಕ್ಕೆ ಮಾರ್ಗಮಧ್ಯದಲ್ಲಿ  ನೆಲೋಗಿ ಕಮಾನ್ ಬಸ್ ನಿಲ್ದಾಣದ ಹತ್ತಿರ ಮಾದಕ ವಸ್ತು ಗಾಂಜಾವನ್ನ ಸಾಗಾಣಿಕೆ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರು ಮೂಲತಃ ಸೋಲಾಪುರದವರಾಗಿದ್ದು ಆರೋಪಿತರ ಹತ್ತಿರವಿದ್ದ 41.8 ಕೆಜಿ ಗಾಂಜಾ ಹಾಗೂ ಒಂದು ಸೈಕಲ್ ಮೋಟಾರನ್ನ ಪೋಲಿಸ್ ಇಲಾಖೆ ವಶಪಡಿಸಿಕೊಂಡಿದೆ. ಈ ಪ್ರಕರಣವನ್ನ ನೆಲೋಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಲಬುರಗಿ ಜಿಲ್ಲೆಯ ಪೋಲಿಸ್ ಅಧೀಕ್ಷಕರಾದ ಇಶಾ ಪಂತ್, ಹೆಚ್ಚುವರಿ ಪೋಲಿಸ್ ಅಧಿಕ್ಷಕ ಪ್ರಸನ್ನ ದೇಸಾಯಿ, ಶಿಲವಂತ S.H. ಪೋಲಿಸ್ ಉಪಾಧಿಕ್ಷಕ . ಜೇವರ್ಗಿ ಸಿಪಿಐ M ಶಿವಪ್ರಸಾದ. ನೆಲೋಗಿ ಪೋಲಿಸ್ ಠಾಣೆ ಪಿಎಸ್ಐ  ರಾಜಕುಮಾರ ಜಾಮಗೊಂಡ. ಪೋಲಿಸ್ ಸಿಬ್ಬಂದಿ ಗುರುಬಸಪ್ಪ ಎ ಎಸ್ ಐ. ಶಿವಪ್ಪ HC. ಸೋಮಶೇಖರ್ HC. ಚಂದ್ರಾಮ HC. ರಾಜಕುಮಾರ್ CPC. ಶಿವರಾಯ CPC ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

You May Also Like

ಚಿತ್ರಮಂದಿರಗಳಿಗೆ ನಿರ್ಬಂಧ ಬೇಡ : ಪುನೀತ್ ಮನವಿ

ಚಲನಚಿತ್ರ ಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲಕ್ಷ್ಮೇಶ್ವರ: ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ

ಲಕ್ಷ್ಮೇಶ್ವರ: ಪಟ್ಟಣದ ಕರೇಗೋರಿ ಆಶ್ರಯ ಕಾಲೊನಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ…

Все возможности мобильного беттинга через MostBet mobile

Все возможности мобильного беттинга через MostBet mobile Где получить промокод на Мостбет…

ಪ್ರಾಮಾಣಿಕ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ: ಹೊಂಬಾಳಿಮಠ

ಸುಗನಹಳ್ಳಿ ಗ್ರಾಮದ ಆಲದಮ್ಮ ಕೆರೆಯ ಅಭಿವೃದ್ಧಿಗೆ ಟೆಂಡರ್ ಕರೆದಿದ್ದು, ಪ್ರಾಮಾಣಿಕ ಗುತ್ತಿಗೆದಾರರಿಗೆ ಅಧಿಕಾರಿಗಳು ಕಾಮಗಾರಿ ನೀಡುವುದರ ಮೂಲಕ ಸಾರ್ವಜನಿಕರ ಹಿತದೃಷ್ಟಿ ಕಾಯಬೇಕೆಂದು ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ ಹೊಂಬಾಳಿಮಠ ಆಗ್ರಹಿಸಿದರು.